Home ಕರಾವಳಿಪುತ್ತೂರು ಬಿಜೆಪಿ ಮುಖಂಡನ ಪುತ್ರನ ಲವ್-ಸೆಕ್ಸ್-ದೋಖಾ ಕೇಸ್: ಮೈಸೂರಿನಲ್ಲಿ ಆರೋಪಿ ಕೃಷ್ಣ ಜೆ.ರಾವ್ ಬಂಧನ

ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಲವ್-ಸೆಕ್ಸ್-ದೋಖಾ ಕೇಸ್: ಮೈಸೂರಿನಲ್ಲಿ ಆರೋಪಿ ಕೃಷ್ಣ ಜೆ.ರಾವ್ ಬಂಧನ

by diksoochikannada.com

ಪುತ್ತೂರು: ಪುತ್ತೂರು ತಾಲೂಕಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ವಿರುದ್ಧ ಲವ್-ಸೆಕ್ಸ್-ದೋಖಾ ಆರೋಪದ ಪ್ರಕರಣದಲ್ಲಿ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಜೆ.ರಾವ್ ನನ್ನು ಮೈಸೂರಿನ ಟಿ.ನರಸೀಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಮಹಿಳಾ ಪೊಲೀಸ್ ಠಾಣಾ ಪೊಲೀಸರು ಪುತ್ತೂರಿಗೆ ಕರೆತಂದಿದ್ದಾರೆ.

ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಕೃಷ್ಣ ಜೆ.ರಾವ್ ಮತ್ತು ಸಂತ್ರಸ್ತೆ ನಡುವಿನ ಪ್ರೇಮ ಸಂಬಂಧ ಹೈಸ್ಕೂಲ್ ಕಾಲದಿಂದಲೂ ಇತ್ತು ಎನ್ನಲಾಗಿದೆ. 2024ರ ಅಕ್ಟೋಬರ್ 11ರಂದು ಯುವತಿಯನ್ನೇ ತನ್ನ ಮನೆಗೆ ಕರೆದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪವಿದೆ. ನಂತರವೂ 2025ರ ಜನವರಿಯಲ್ಲಿ ಮತ್ತೆ ಇದೇ ರೀತಿಯ ಸಂಬಂಧ ಮುಂದುವರೆದಿದ್ದು, ಯುವತಿ ಗರ್ಭವತಿಯಾದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಮದುವೆಗೆ ಒಪ್ಪಿದ ಕೃಷ್ಣ ಬಳಿಕ ನಿರಾಕರಿಸಿದ್ದಾನೆ. ಮಗುವಿನ ಪಿತೃತ್ವ ಒಪ್ಪಿಕೊಳ್ಳಲು ಸಹ ಹಿಂದೇಟು ಹಾಕಿದ್ದಾನೆ. ಈ ಕುರಿತು ಯುವತಿ ಪುತ್ತೂರು ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದು, ತನಿಖೆ ಆರಂಭವಾಗಿತ್ತು.
ಘಟನೆಯ ಸಂಬಂಧ ಕಳೆದ ಹಲವು ತಿಂಗಳ ಹಿಂದೆಯೇ ಸ್ಥಳೀಯ ಮಟ್ಟದಲ್ಲಿ ರಾಜಿ ಪಂಚಾಯಿತಿ ನಡೆದಿದ್ದು, ಅಲ್ಲಿ ಕೃಷ್ಣ ವಿವಾಹಕ್ಕೆ ಒಪ್ಪಿದ್ದ ಎನ್ನಲಾಗಿದೆ. ಆದರೆ, ಯುವಕನಿಗೆ ಆಗ 21 ವರ್ಷ ಪೂರ್ತಿಯಾಗದ ಹಿನ್ನಲೆಯಲ್ಲಿ ಮದುವೆಗೆ ತಾತ್ಕಾಲಿಕ ಅಡ್ಡಿಯಾಯಿತೆಂದು ತಿಳಿದು ಬಂದಿದೆ. ಜೂನ್ 23, 2025ರಂದು ಕೃಷ್ಣ 21 ವರ್ಷವನ್ನು ಪೂರೈಸಿದರೂ ವಿವಾಹಕ್ಕೆ ಹಿಂದೇಟು ನೀಡಿದ್ದಾನೆ. ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮೈಸೂರಿನಲ್ಲಿ ಆರೋಪಿ ಕೃಷ್ಣ ಜೆ.ರಾವ್ ನನ್ನು ವಶಕ್ಕೆ ಪಡೆದ ಪೊಲೀಸರು ಪುತ್ತೂರಿಗೆ ಕರೆತಂದಿದ್ದಾರೆ.

You may also like

Leave a Comment