Home ಕರಾವಳಿವಿದ್ಯುತ್ ಶಾಕ್ ಗೆ ವ್ಯಕ್ತಿ ಸಾವು: ಮೆಸ್ಕಾಂ ನಿರ್ಲಕ್ಷ್ಯ ಆರೋಪ!

ವಿದ್ಯುತ್ ಶಾಕ್ ಗೆ ವ್ಯಕ್ತಿ ಸಾವು: ಮೆಸ್ಕಾಂ ನಿರ್ಲಕ್ಷ್ಯ ಆರೋಪ!

by diksoochikannada.com

ಮಂಗಳೂರು: ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ನಡೆದಿದೆ. ಕಲ್ಲಪಣೆಯ ದಿವಾಕರ ಆಚಾರ್ಯ(45) ಎಂಬವರು ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತಾಗಿ ಮೃತಪಟ್ಟ ಘಟನೆ ನಡೆದಿದ್ದು, ಅವರು ವೈರ್‌ ಅನ್ನು ಕೈಯಲ್ಲಿ ಹಿಡಿಕೊಂಡ ಸ್ಥಿತಿಯಲ್ಲಿದ್ದರು.

Oplus_0

ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಕೊಡಿಯಾಲ ಗ್ರಾಮಪಂಚಾಯತ್ ನಲ್ಲಿ ಸುಮಾರು 3 ವರ್ಷಗಳ ಮೆಸ್ಕಾಂ ಅಧಿಕಾರಿಗಳು ಬಂದು ನಡೆದ ಅದಾಲತ್ ಸಂದರ್ಭದಲ್ಲಿ ತಂತಿಗಳ ಮರು ಜೋಡಣೆ ಕೆಲಸದ ಬಗ್ಗೆ ಸ್ಥಳೀಯರಾದ ಸಂತೋಷ್ ನಾಯಕ್ ಕೊಡಿಯಾಲ ಮನವಿ ನೀಡಿದ್ದರು. ಆದರೆ ಇಷ್ಟರವರೆಗೆ ಅದರ ಬಗ್ಗೆ ಎಚ್ಚೆತ್ತು ಕೊಳ್ಳದೆ ಇರುವುದರಿಂದ ಹಾಗೂ ಅದರ ತೀವ್ರತೆಯ ವಿಚಾರಗಳು ಗೊತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವುದೇ ಈ ಅವಘಡಕ್ಕೆ ನೇರ ಕಾರಣ ಎಂದು ಆರೋಪಿಸಲಾಗಿದೆ. ಸದ್ಯ ಮೆಸ್ಕಾಂ ನಿರ್ಲಕ್ಷ್ಯ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದ್ದು, ಪರಿಹಾರದ ಜೊತೆಗೆ ತಂತಿಗಳ ಮರು ಜೋಡಣೆ ನಡೆಸುವಂತೆ ಆಗ್ರಹಿಸಲಾಗಿದೆ.

You may also like

Leave a Comment