Home ಕರಾವಳಿಪುತ್ತೂರಿನಲ್ಲಿ ಲಾಂಗ್ ಹಿಡಿದು ಯುವಕನ ಹುಚ್ಚಾಟ: ವಶಕ್ಕೆ ಪಡೆದ ಪೊಲೀಸರು!

ಪುತ್ತೂರಿನಲ್ಲಿ ಲಾಂಗ್ ಹಿಡಿದು ಯುವಕನ ಹುಚ್ಚಾಟ: ವಶಕ್ಕೆ ಪಡೆದ ಪೊಲೀಸರು!

by diksoochikannada.com

ಪುತ್ತೂರು: ಸಾರ್ವಜನಿಕವಾಗಿ ಲಾಂಗ್ ಹಿಡಿದು ಬೀದಿಯಲ್ಲಿ ಹುಚ್ಚಾಟ ನಡೆಸುತ್ತಿದ್ದ ಯುವಕನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಸ್ಬಾ ಗ್ರಾಮದ ಬೊಳುವಾರು ಎಂಬಲ್ಲಿ ಘಟನೆ ನಡೆದಿದೆ.

Oplus_0

ಹಾಸನ ಮೂಲದ ರಾಜು (45) ಎಂದು ಗುರುತಿಸಲಾದ ಈ ವ್ಯಕ್ತಿ, ಪ್ರಸ್ತುತ ಬಂಟ್ವಾಳದಲ್ಲಿ ವಾಸವಿದ್ದ ಎನ್ನಲಾಗಿದೆ. ಲಾಂಗ್ ಹಿಡಿದು ಬೆದರಿಕೆ ಹಾಕುವ ರೀತಿಯಲ್ಲಿ ನಡೆಸುತ್ತಿದ್ದ ಹುಚ್ಚಾಟದಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದರು.

ಸಾರ್ವಜನಿಕರು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪೊಲೀಸರು ರಾಜು ವಿರುದ್ಧ ಇಂಡಿಯನ್ ಆರ್ಮ್ಸ್ ಆಕ್ಟ್ ಹಾಗೂ 110 ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

You may also like

Leave a Comment