Home ಕರಾವಳಿದೆಹಲಿ ಸ್ಫೋಟ ಬೆನ್ನಲ್ಲೇ ನಾಳೆ ಪ್ರಧಾನಿ ಮೋದಿ ಕ್ಯಾಬಿನೆಟ್ ಭದ್ರತಾ ಸಮಿತಿ ಸಭೆ: ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ!

ದೆಹಲಿ ಸ್ಫೋಟ ಬೆನ್ನಲ್ಲೇ ನಾಳೆ ಪ್ರಧಾನಿ ಮೋದಿ ಕ್ಯಾಬಿನೆಟ್ ಭದ್ರತಾ ಸಮಿತಿ ಸಭೆ: ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ!

by diksoochikannada.com

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ 5:30ಕ್ಕೆ ನಡೆಯಲಿರುವ ಕ್ಯಾಬಿನೆಟ್ ಭದ್ರತಾ ಸಮಿತಿ (CCS) ಪಾಲ್ಗೊಳ್ಳಲಿದ್ದಾರೆ. ಭೂತಾನಿನಿಂದ ಪ್ರಧಾನಮಂತ್ರಿ ಮರಳುತ್ತಿದ್ದಂತೆಯೇ ಈ ಸಭೆ ನಡೆಯಲಿದೆ.

ಈ ಸಭೆಯನ್ನು ಸೋಮವಾರ ಸಂಜೆ ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದ ಹಿನ್ನೆಲೆ ಕರೆಯಲಾಗಿದೆ. ಈ ಭೀಕರ ಘಟನೆಯಲ್ಲಿ 12 ಮಂದಿ ಜೀವ ಕಳೆದುಕೊಂಡಿದ್ದರು. ಭೂತಾನ್ ಭೇಟಿಯಲ್ಲಿ ಇದ್ದ ಪ್ರಧಾನಮಂತ್ರಿ ಮೋದಿ, ದೆಹಲಿಯ ಕೆಂಪುಕೋಟೆ ಹತ್ತಿರ ಸಂಭವಿಸಿದ ಕಾರು ಸ್ಫೋಟದ ಬಗ್ಗೆ ದುಃಖ ವ್ಯಕ್ತಪಡಿಸಿ, ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಅತೀ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಭೂತಾನ್ ನ ರಾಜಧಾನಿ ಥಿಂಪುದಲ್ಲಿ ಮಾತನಾಡಿದ ಮೋದಿ, ದೆಹಲಿ‌ನಲ್ಲಿ ಒಂದು ದುಃಖದ ಘಟನೆ ನಡೆದಿದೆ. ತಮ್ಮ ಪ್ರಿಯರನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಇಂದು ನಾನು ಭಾರವಾದ ಮನಸ್ಸಿನಿಂದ ಇಲ್ಲಿ ಬಂದಿದ್ದೇನೆ. ನಿನ್ನೆ ದಿನದ ದೆಹಲಿಯ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ದುಃಖದ ವೇಳೆಯಲ್ಲಿ ಇಡೀ ದೇಶ ಪೀಡಿತ ಕುಟುಂಬಗಳೊಂದಿಗೆ ನಿಂತಿದೆ. ನಿನ್ನೆ ರಾತ್ರಿ ನಾನು ಎಲ್ಲಾ ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಘಟನೆಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ತನಿಖೆ ಮಾಡಲಿವೆ. ಇದರ ಹಿಂದೆ ಯಾರೇ ಇರಲಿ ಅವರಿಗೆ ನ್ಯಾಯ ಕೊಡಲಾಗುವುದು ಎಂದರು. ಈ ಹಿಂದೆ ಪೆಹಲ್ಗಾಮ್ ದಾಳಿಯಾದಾಗ ಪ್ರಧಾನಿ ಮೋದಿ ಇಂಡಸ್ ನೀರಿನ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡದ್ದು ಐತಿಹಾಸಿಕ ಕ್ರಮವಾಗಿತ್ತು. ಇದು ಪಾಕಿಸ್ತಾನದ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡಿತ್ತು. ಅಲ್ಲದೇ ಮೋದಿ ಹೊಸ ರಾಷ್ಟ್ರೀಯ ಭದ್ರತಾ ಸಿದ್ಧಾಂತವನ್ನು ಸ್ಥಾಪಿಸಿದ್ದರು. ಮುಂದಿನ ಯಾವುದೇ ಭಯೋತ್ಪಾದಕ ದಾಳಿ ಯುದ್ಧ ಕ್ರಮವೆಂದು ಪರಿಗಣಿಸಲಾಗುವುದು ಎಂದಿದ್ದರು. ಇದರಿಂದ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಬಿಸಿ ಮುಟ್ಟಿಸಿದ್ದರು.

You may also like

Leave a Comment