Home ಕರಾವಳಿಪುತ್ತೂರು ಅಪ್ರಾಪ್ತರಿಗೆ ಕಿರುಕುಳ: ಇಬ್ಬರು ಆರೋಪಿಗಳ ಬಂಧನ

ಪುತ್ತೂರು ಅಪ್ರಾಪ್ತರಿಗೆ ಕಿರುಕುಳ: ಇಬ್ಬರು ಆರೋಪಿಗಳ ಬಂಧನ

by diksoochikannada.com

ಪುತ್ತೂರು: ಪುತ್ತೂರಿನಲ್ಲಿ ಅಪ್ರಾಪ್ತರ ಮೇಲೆ ಕಿರುಕುಳ ನಡೆಸಿದ ಇಬ್ಬರು ಯುವಕರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಡಬ ನಿವಾಸಿ ಪುರುಷೋತ್ತಮ (43) ಹಾಗೂ ಆರ್ಯಾಪು, ಪುತ್ತೂರು ನಿವಾಸಿ ರಾಮಚಂದ್ರ (38) ಎಂದು ಗುರುತಿಸಲಾಗಿದೆ.

Oplus_0

ಪುತ್ತೂರಿನ ಬಿರುಮಲೆಗುಡ್ಡದಲ್ಲಿ ವಿಹಾರಕ್ಕೆ ಬಂದಿದ್ದ ಅಪ್ರಾಪ್ತ ಜೋಡಿಗೆ ಆರೋಪಿಗಳು ದೌರ್ಜನ್ಯವೆಸಗಿದ್ದು, ಪಾನಮತ್ತ ಸ್ಥಿತಿಯಲ್ಲಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜೋಡಿಯ ಫೋಟೋ ಹಾಗೂ ವೀಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನಸಿಕ ಹಿಂಸೆ ನೀಡಲಾಗಿದೆ. ಈ ಕುರಿತಂತೆ ಅಪ್ರಾಪ್ತ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ವಿಡಿಯೋದಲ್ಲಿ ಬಾಲಕನು ಅನ್ಯಧರ್ಮದವನಾಗಿದ್ದಾನೆ ಎಂದು ಹೇಳಿದ್ದು, ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ರೀತಿಯ ಪ್ರಚೋದನಾತ್ಮಕ ಹೇಳಿಕೆಗಳನ್ನೂ ನೀಡಿದ್ದಾರೆ ಎನ್ನಲಾಗಿದೆ.


ಬಿಎಸ್ ಎಸ್ 126(2) – ಕೋಮು ದ್ವೇಷವನ್ನೂ ಸಮಾಜದಲ್ಲಿ ಭಿನ್ನತೆ ಉಂಟುಮಾಡುವ ಚಟುವಟಿಕೆ, 352 – ಬಲವಂತದಿಂದ ದೌರ್ಜನ್ಯ, 351(2) – ಕಿರುಕುಳ ನೀಡುವುದು, 353(1)(C) – ಅಪ್ರಾಪ್ತರ ಮೇಲೆ ದೌರ್ಜನ್ಯ, 57, 196(1)(a) – ಅಪರಾಧದ ತಡೆಗೆ ಸಂಬಂಧಿಸಿದ ವಿಧಿಗಳು, 3(5) BNS 2023 – ಸಾಮಾಜಿಕ ಶಾಂತಿಗೆ ಧಕ್ಕೆಯಾಗುವ ಪ್ರಚೋದನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ

You may also like

Leave a Comment