Home ಉದ್ಯೋಗಧರ್ಮಸ್ಥಳದಲ್ಲಿ ಚಿನ್ನಾಭರಣ ಕಳವು: ಇಬ್ಬರು ಮಹಿಳೆಯರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ!

ಧರ್ಮಸ್ಥಳದಲ್ಲಿ ಚಿನ್ನಾಭರಣ ಕಳವು: ಇಬ್ಬರು ಮಹಿಳೆಯರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ!

by diksoochikannada.com

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಪೊಲೀಸ್ ಬಲೆಗೆ ಸಿಕ್ಕಿದ್ದು, ರೂ. 5,32,000 ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

2025ರ ಮೇ 3 ರಂದು ದರ್ಶನಕ್ಕೆ ಬಂದಿದ್ದ ಲತಾ ಎಂಬುವರ ಬ್ಯಾಗಿನಲ್ಲಿ ಇರಿಸಿದ್ದ 97 ಗ್ರಾಂ (ಮೌಲ್ಯ ರೂ. 6,79,000) ಚಿನ್ನಾಭರಣವನ್ನು ಕಳವು ಮಾಡಿರುವ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಧರ್ಮಸ್ಥಳದ ದ್ವಾರದ ಬಳಿ ಆರೋಪಿಗಳಾದ ಹುಬ್ಬಳ್ಳಿ ಸಟಲ್ಮೆಂಟ್‌ನ ಬಿ.ಬಿ. ಜಾನ್ (59) ಮತ್ತು ಆಕೆಯ ಮಗಳು ಆರತಿ @ ಮಸಾಬಿ @ ಅಸ್ಮಾ (34)ರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹುಬ್ಬಳ್ಳಿ ಮನೆಯ ಪರಿಶೀಲನೆಯಲ್ಲಿ, ಕಳವುಗೈದ 76 ಗ್ರಾಂ ಚಿನ್ನಾಭರಣ (ಮೌಲ್ಯ ಸುಮಾರು ರೂ. 5,32,000) ಪತ್ತೆಯಾಗಿದೆ. ಪೊಲೀಸ್ ತಂಡದ ಕಾರ್ಯಾಚರಣೆ
ಈ ಪ್ರಕರಣ ಪತ್ತೆ ಕಾರ್ಯವನ್ನು ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ ನಿರೀಕ್ಷಕ ಬಿ.ಜಿ. ಸುಬ್ಬಪುರ್ ಮಠ್ ಅವರ ನೇತೃತ್ವದ ತಂಡ ಯಶಸ್ವಿಯಾಗಿ ನಡೆಸಿದೆ.

You may also like

Leave a Comment