Home ಕರಾವಳಿಬಂಟ್ವಾಳದಲ್ಲಿ ಭೀಕರ ಅಪಘಾತ: ಮೂವರು ದಾರುಣ ಸಾವು: ಹಲವರು ಗಂಭೀರ

ಬಂಟ್ವಾಳದಲ್ಲಿ ಭೀಕರ ಅಪಘಾತ: ಮೂವರು ದಾರುಣ ಸಾವು: ಹಲವರು ಗಂಭೀರ

by diksoochikannada.com

ಬಂಟ್ವಾಳ: ಬಿಸಿರೋಡ್ (ಬಿ.ಸಿ.ರೋಡ್) ಎನ್.ಜಿ. ಸರ್ಕಲ್ ಬಳಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಬೆಂಗಳೂರಿನ ಪೀಣ್ಯ ನಿವಾಸಿಗಳಾದ ರವಿ (64), ರಮ್ಯ (23) ಹಾಗೂ ನಂಜಮ್ಮ (75) ಎಂದು ಗುರುತಿಸಲಾಗಿದೆ. ರಮ್ಯಾ ಅವರು ಒಬ್ಬ ಪೊಲೀಸ್ಾಧಿಕಾರಿಯ ಪತ್ನಿ ಎಂಬ ಮಾಹಿತಿ ಲಭ್ಯವಾಗಿದೆ. ಗಂಭೀರ ಗಾಯಗೊಂಡವರಲ್ಲಿ ಕೀರ್ತಿ, ಸುಶೀಲಾ, ಬಿಂದು ಮತ್ತು ಪ್ರಶಾಂತ್ ಸೇರಿದ್ದಾರೆ. ಚಾಲಕ ಸುಬ್ರಹ್ಮಣ್ಯ ಹಾಗೂ ಕಿರಣ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ದರ್ಶನಕ್ಕೆಂತೆ ಹೊರಟಿದ್ದ ಒಂಬತ್ತು ಮಂದಿ ಪ್ರಯಾಣಿಕರನ್ನು ಹೊತ್ತ ಇನ್ನೋವಾ ಕಾರು ಮುಂಜಾನೆ ಸುಮಾರು 4.40ರ ಸುಮಾರಿಗೆ ಎನ್.ಜಿ. ಸರ್ಕಲ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಒರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸಿದ ಬಳಿಕ ಪ್ರಾಣಬಿಟ್ಟರು. ಘಟನೆಯ ಬಗ್ಗೆ ಸ್ಥಳೀಯರು ಅವೈಜ್ಞಾನಿಕ ಮಾದರಿಯ ಸರ್ಕಲ್ ನಿರ್ಮಾಣವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿರುವರು. ಬಿಸಿರೋಡು–ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಿತ ನೂತನ ಸರ್ಕಲ್‌ ಈಗಾಗಲೇ ಹಲವು ಅಪಾಯಗಳಿಗೆ ಕಾರಣವಾಗಿರುವುದು ಚರ್ಚೆಯ ವಿಷಯವಾಗಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment