Home ಉದ್ಯೋಗಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು!

ಮಂಗಳೂರು: ಬಂಟ್ವಾಳದ ಕುಕ್ಕಿಪಾಡಿ ಗ್ರಾಮದ ಕೆಂತಲೆ ಎಂಬಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕನ ಕುತ್ತಿಗೆಗೆ ಹಗ್ಗ ಸಿಲುಕಿ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.


ಹೋಟೆಲ್ ಕಾರ್ಮಿಕ ಆನಂದ ಪೂಜಾರಿ ಇವರ ಪುತ್ರ ಅಮೃತ್ ಎ ಪೂಜಾರಿ (9) ಮೃತ ಬಾಲಕ. ಈತ ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಮನೆಯೊಳಗೆ ಕಿಟಕಿ ಬಳಿ ಒಬ್ಬನೇ ಆಟವಾಡುತ್ತಿದ್ದು, ತಾಯಿ ಮತ್ತು ಸಹೋದರಿ ಅಡುಗೆ ಕೊನೆಯಲ್ಲಿದ್ದರು. ಇದೇ ವೇಳೆ ಕಿಟಕಿಗೆ ಕಟ್ಟಿದ್ದ ಸ್ಕಿಪ್ಪಿಂಗ್ ಆಟದ ಹಗ್ಗ ಈತನ ಕುತ್ತಿಗೆಗೆ ಬಿಗಿದ ರೀತಿಯಲ್ಲಿ ಸಿಲುಕಿಕೊಂಡಿದ್ದಾನೆ. ತಕ್ಷಣವೇ ತಾಯಿ ನೋಡಿ ಬೊಬ್ಬೆ ಹಾಕಿದಾಗ ಪಕ್ಕದ ಮನೆಯಲ್ಲಿದ್ದ ಬಾಲಕನ ಚಿಕ್ಕಪ್ಪ ಜಯಾನಂದ ಮತ್ತಿತರರು ಬಂದು ಬಾಲಕನನ್ನು ಮೂಡುಬಿದ್ರೆ ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ಆತನು ಮೃತಪಟ್ಟಿರುವುದು ತಿಳಿದು ಬಂದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಅಮೃತ್ ಬಂಟ್ವಾಳ ಎಸ್ ವಿಎಸ್ ಆಂಗ್ಲ ಮಾಧ್ಯಮ ಶಾಲೆ 3 ನೇ ತರಗತಿ ವಿದ್ಯಾರ್ಥಿಯಾಗಿದ್ದು, ತಂದೆ, ತಾಯಿ ಮತ್ತು ಇಬ್ಬರು ಅಕ್ಕಂದಿರು ಇದ್ದಾರೆ.

You may also like

Leave a Reply