Home ಕರಾವಳಿಮಂಗಳೂರು: 2025ರಲ್ಲಿ 40 ಡ್ರಗ್ ಕೇಸ್: 67 ಅರೆಸ್ಟ್: 1.36 ಕೋಟಿ ಮೌಲ್ಯದ ಮಾದಕ ವಸ್ತು ಸೀಝ್!

ಮಂಗಳೂರು: 2025ರಲ್ಲಿ 40 ಡ್ರಗ್ ಕೇಸ್: 67 ಅರೆಸ್ಟ್: 1.36 ಕೋಟಿ ಮೌಲ್ಯದ ಮಾದಕ ವಸ್ತು ಸೀಝ್!

by diksoochikannada.com

ಮಂಗಳೂರು: 2025 ನೇ ಸಾಲಿನಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ/ಸಾಗಟ ಮಾಡುವವರ ವಿರುದ್ದ ಇದುವರೆಗೆ 40 ಪ್ರಕರಣ ದಾಖಲಿಸಿ 67 ಆರೋಪಿಗಳನ್ನು ಬಂಧನ ಮಾಡಲಾಗಿದ್ದು, ಆರೋಪಿಗಳಿಂದ ರೂ 1,36,35,650/- ಬೆಳೆಬಾಳುವ 145 ಕೆ.ಜಿ 324 ಗ್ರಾಂ ಗಾಂಜಾ, 319.976 ಗ್ರಾಂ ಎಂ.ಡಿ.ಎಂ.ಎ, 13 ಗ್ರಾಂ ಎಂ.ಡಿ.ಎಂ.ಎ Pills, 756.52 Hydro weed ganja ಹಾಗೂ ಇತರೆ ವಿವಿಧ ಮಾದಕ ಸೊತ್ತುಗಳನ್ನು ವಶಪಡಿಸಲಾಗಿದೆ.

ಅದರಂತೆ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ಕೋರ್ಟ್ ಆದೇಶದಂತೆ ನಾಶ ಮಾಡಲಾಗಿದೆ.‌ ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಾದಕ ಸೊತ್ತುಗಳನ್ನು ಈ ಹಿಂದೆ 15-01-2025 ರಂದು ಮಾದಕ ವಸ್ತುಗಳ ನಾಶ ಮಾಡುವ ಕಾರ್ಯಕ್ರಮವನ್ನು ಕೈಗೊಂಡು ಒಟ್ಟು ರೂ. 6,80,86,558/- ಮೌಲ್ಯದ 335 ಕೆ.ಜಿ 460 ಗ್ರಾಂ ಗಾಂಜಾ, 7 ಕೆ.ಜಿ 640 ಗ್ರಾಂ ಎಂ.ಡಿ.ಎಂ.ಎ ಮತ್ತು  16 Gms Cocaine ಮಾದಕ ವಸ್ತುಗಳನ್ನು ಈಗಾಗಲೇ ನಾಶ ಮಾಡಿ ವಿಲೇವಾರಿ ಮಾಡಲಾಗಿರುತ್ತದೆ.

ಜುಲೈ 10ರಂದು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕೊಲ್ನಾಡು ಇಂಡಸ್ಟ್ರೀಯಲ್ ಪ್ರದೇಶದಲ್ಲಿರುವ Re Sustainability Healthcare Solutions Ltd. ಎಂಬಲ್ಲಿ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ ಮಾಡುವ ಕಾರ್ಯಕ್ರಮವನ್ನು ನಡೆಸಿದ್ದು, ಮಂಗಳೂರು ನಗರ ವ್ಯಾಪ್ತಿಯ 9 ಠಾಣೆಗಳ ಒಟ್ಟು  23  ಪ್ರಕರಣಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ 21 ಕೆ.ಜಿ 320 ಗ್ರಾಂ ಗಾಂಜಾ ಮತ್ತು 60 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಗಿದೆ.

You may also like

Leave a Comment