Home ಕರಾವಳಿಖಳನಟ ಹರೀಶ್ ರಾಯ್ ನಿಧನ: ಉಡುಪಿಯ ಸ್ವರ್ಣೋದ್ಯಮ ಕುಟುಂಬದಿಂದ ಗಾಂಧಿನಗರದ ಹಾದಿ!

ಖಳನಟ ಹರೀಶ್ ರಾಯ್ ನಿಧನ: ಉಡುಪಿಯ ಸ್ವರ್ಣೋದ್ಯಮ ಕುಟುಂಬದಿಂದ ಗಾಂಧಿನಗರದ ಹಾದಿ!

by diksoochikannada.com

ಮಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ (ಮೂಲ ಹೆಸರು ಹರೀಶ್ ಆಚಾರ್ಯ) ಅವರು ನಿಧನ ಹೊಂದಿದ್ದಾರೆ. ಮೂಲತಃ ಉಡುಪಿಯವರಾದ ಹರೀಶ್ ರಾಯ್ ಅವರು ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ವಿವಿಧ ಖಳನಾಯಕ ಹಾಗೂ ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಉಡುಪಿಯ ಅಂಬಲಪಾಡಿ ಸಮೀಪ ಹರೀಶ್ ಆಚಾರ್ಯ ಅವರ ಮನೆ ಇದ್ದು, ಕುಟುಂಬವು ಅಲ್ಲಿ ವಾಸವಿದೆ. ಕುಟುಂಬದ ಮೂಲ ಉದ್ಯಮವು ಸ್ವರ್ಣೋದ್ಯಮ. ದಶಕಗಳ ಹಿಂದೆ ಉಡುಪಿಯ ನೊವೆಲ್ಟಿ ಜ್ಯುವೆಲ್ಲರ್ಸ್ ಹೆಸರಿನಲ್ಲಿ ಪ್ರಸಿದ್ಧಿಯಾಗಿದ್ದ ಈ ಕುಟುಂಬ, ಕೃಷ್ಣಮಠದ ರಥ ಬೀದಿಯ ಸ್ವರ್ಣೋದ್ಯಮದ ಮೂಲಕ ಜನಪ್ರಿಯತೆ ಗಳಿಸಿತ್ತು. ಹರೀಶ್ ರಾಯ್ ಅವರ ಸಹೋದರ ಸತೀಶ್ ಹಾಗೂ ಕುಟುಂಬವು ಪ್ರಸ್ತುತ ದುಃಖದಲ್ಲಿ ಮುಳುಗಿದ್ದು, ಸದ್ಯ ಬೆಂಗಳೂರಿನಿಂದ ಪಾರ್ಥಿವ ಶರೀರ ಉಡುಪಿ ತಲುಪಿ ನಾಳೆ ಉಡುಪಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಹರೀಶ್ ರಾಯ್ ಅವರು ತಮ್ಮ ವಿಶಿಷ್ಟ ಅಭಿನಯದಿಂದ ಕನ್ನಡ ಸಿನೆಮಾದಲ್ಲಿ ಗುರುತಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದರು.

ಡಿಫರೆಂಟ್ ಮ್ಯಾನರಿಸಂನ ಖಳನಟ!

ಹರೀಶ್ ರಾಯ್ ಕನ್ನಡ ಚಲನಚಿತ್ರರಂಗದಲ್ಲಿ ಪ್ರಚಲಿತವಾಗಿದ್ದು 1990ರ ದಶಕದ ಬಳಿಕ. ಅವರ ಮೊದಲ ಪ್ರಮುಖ ಚಿತ್ರಗಳಲ್ಲಿ ಓಂ (1995) ಮತ್ತು ಅಪರೇಷನ್ ಅಂತ (1995) ಇದ್ದವು. K.G.F: Chapter 1 ಮತ್ತು K.G.F: Chapter 2 (KGF)ಗಳಲ್ಲಿ “ಚಾಚಾ” ಪಾತ್ರದಿಂದ ಗಮನ ಸೆಳೆದಿದ್ದರು. 1990ರ ದಶಕದಿಂದ 2010ರ ದಶಕದವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ‌ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ಎಂಬ ಗಂಭೀರ ಖಾಯಿಲೆ ಜೊತೆ ಸೆಣಸಾಡಿ ಇಹಲೋಕ ತ್ಯಜಿಸಿದ್ದಾರೆ.

You may also like

Leave a Comment