Home ಉದ್ಯೋಗಪುತ್ತೂರು: ದಾಖಲೆ ಪತ್ರಗಳಿಲ್ಲದೆ ಜಾನುವಾರು ಮಾರಾಟ ಮಾಡಿದ್ದ ಆರೋಪಿಯ ಮನೆ, ಕೊಟ್ಟಿಗೆ ಜಪ್ತಿ!

ಪುತ್ತೂರು: ದಾಖಲೆ ಪತ್ರಗಳಿಲ್ಲದೆ ಜಾನುವಾರು ಮಾರಾಟ ಮಾಡಿದ್ದ ಆರೋಪಿಯ ಮನೆ, ಕೊಟ್ಟಿಗೆ ಜಪ್ತಿ!

by diksoochikannada.com

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಜಾನುವಾರು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಆರೋಪಿಯ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನಿಗೆ ಸೇರಿದ ಮನೆ ಮತ್ತು ಕೊಟ್ಟಿಗೆ ಪರಿಸರವನ್ನು ಜಪ್ತಿ ಮಾಡಲಾಗಿದೆ.

ಅಕ್ಟೋಬರ್ 5ರಂದು ಬೆಳಗಿನ ಜಾವ ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೇರಳದ ಕಡೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಪುತ್ತೂರು ಗ್ರಾಮಾಂತರ ಪೊಲೀಸರು ಬಿಳಿಯೂರುಕಟ್ಟೆ ಎಂಬಲ್ಲಿ ವಾಹನವನ್ನು ತಡೆದು ಪರಿಶೀಲಿಸಿದ್ದರು. ವಾಹನದಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ಪರವಾನಿಗೆ ಹಾಗೂ ದಾಖಲೆಪತ್ರಗಳನ್ನು ಪಡೆಯದೆ ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಆರ್ಯಾಪು ನಿವಾಸಿ ಶಿವಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣದ ಮುಂದುವರಿದ ಕ್ರಮವಾಗಿ ಇದೀಗ ಆರೋಪಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಜಪ್ತಿ ಮಾಡಲಾಗಿದೆ

You may also like

Leave a Reply